Tag: court

Home » court
punith
Post

ಜೈಲಿನಲ್ಲಿರುವ ಪುನೀತ್ ಕೆರೆಹಳ್ಳಿ ವಿರುದ್ದ ಬಾಡಿ ವಾರಂಟ್ ! ‘ಸಕಾರಣ’ಗಳಿವೆ ಎಂದ ಕೋರ್ಟ್ ! 

– ನವೀನ್ ಸೂರಿಂಜೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರ ಸಂಬಂಧ ರೌಡಿಶೀಟರ್ ಪುನೀತ್ ಕೆರೆಹಳ್ಳಿ ವಿರುದ್ದ ಬಾಡಿ ವಾರೆಂಟ್ ಜಾರಿಯಾಗಿದೆ. ಪ್ರಕರಣವೊಂದರಲ್ಲಿ ಎ1 ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಮತ್ತೊಂದು ಪ್ರಕರಣದ ವಿಚಾರಣೆ ಸಂಬಂಧ ಬಾಡಿ ವಾರೆಂಟ್ ಹೊರಡಿಸಲಾಗಿದೆ.  ಪ್ರಸ್ತುತ ಪುನೀತ್ ಕೆರೆಹಳ್ಳಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದು ಬಂಧನದಲ್ಲಿದ್ದು, ಕೈದಿ ನಂ : UTP No.8642/2026 ಯನ್ನು ಹೊಂದಿದ್ದಾರೆ. ಹೀಗಾಗಿ, ಬೇರೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಯನ್ನು ಬಸವೇಶ್ವರನಗರ ಪೊಲೀಸರು ತಮ್ಮ...

ಕೆಜಿಎಫ್ ಬೆಮೆಲ್ ಗುತ್ತಿಗೆ ಕಾರ್ಮಿಕರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತೀರ್ಪು ! ಹೋರಾಟ ನಡೆದಿದ್ದು ಹೇಗೆ ? ತೀರ್ಪಿನಲ್ಲಿ ಏನೇನಿದೆ ?  
Post

ಕೆಜಿಎಫ್ ಬೆಮೆಲ್ ಗುತ್ತಿಗೆ ಕಾರ್ಮಿಕರಿಗೆ ‘ಸಮಾನ ಕೆಲಸಕ್ಕೆ ಸಮಾನ ವೇತನ’ ತೀರ್ಪು ! ಹೋರಾಟ ನಡೆದಿದ್ದು ಹೇಗೆ ? ತೀರ್ಪಿನಲ್ಲಿ ಏನೇನಿದೆ ?  

ಕೆಜಿಎಫ್‌ನ ಬೆಮೆಲ್ ಕಾರ್ಖಾನೆಯಲ್ಲಿ  ಹಲವು ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಹತ್ವದ ನ್ಯಾಯ ದೊರೆತಿದೆ. ಬೆಮೆಲ್‌ನ ನೇರ ಉದ್ಯೋಗಿಗಳು ಮಾಡುತ್ತಿರುವ ಅದೇ ಅಥವಾ ಸಮಾನ ಸ್ವರೂಪದ ಕೆಲಸವನ್ನು ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೂ ಅದೇ ವೇತನ ಶ್ರೇಣಿ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆಯ ಪ್ರಾಧಿಕಾರ ಆದೇಶಿಸಿದೆ. ಈ ಆದೇಶದಿಂದ 81 ಗುತ್ತಿಗೆ ಆಪರೇಟರ್‌ಗಳ ವೇತನದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದ್ದು, ಇದುವರೆಗೆ ಸುಮಾರು 18 ಸಾವಿರ ರೂ. ಆಸುಪಾಸಿನಲ್ಲಿ ವೇತನ ಪಡೆಯುತ್ತಿದ್ದ ಕಾರ್ಮಿಕರ ವೇತನ...

‘ತನಿಖೆಯ ವೈಫಲ್ಯ’ ಮತ್ತು ವೆಂಕಟೇಶ್ ಪ್ರಸನ್ನ
Post

ಕೊಲೆ, ಭ್ರಷ್ಟಾಚಾರ ಆರೋಪದ ಅಧಿಕಾರಿಯೇ ಸೌಜನ್ಯ SITಗೆ ಏಕೆ? ಸುಪ್ರೀಂ ಕೋರ್ಟ್ ಹೇಳಿದ ‘ತನಿಖೆಯ ವೈಫಲ್ಯ’ ಮತ್ತು ವೆಂಕಟೇಶ್ ಪ್ರಸನ್ನ !

– ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ತನಿಖೆ ಇನ್ನು ಸಾಮಾನ್ಯ ಪೊಲೀಸ್ ತನಿಖೆಯ ಪ್ರಶ್ನೆಯಾಗಿ ಉಳಿದಿಲ್ಲ. ಈ ಪ್ರಕರಣದಲ್ಲಿ ತನಿಖೆ ಹೇಗೆ ನಡೆಯಿತು, ತನಿಖಾಧಿಕಾರಿಗಳು ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಿದರು, ಯಾವ ಸಾಕ್ಷ್ಯಗಳನ್ನು ಕಡೆಗಣಿಸಿದರು, ನೈಜ ಆರೋಪಿಗಳತ್ತ ತನಿಖೆ ಏಕೆ ಸಾಗಲಿಲ್ಲ ಮತ್ತು ತನಿಖೆಯ ವೈಫಲ್ಯದಿಂದ ಯಾರಿಗೆ ಲಾಭವಾಯಿತು ಎಂಬ ಪ್ರಶ್ನೆಗಳಿಗೆ ಇದೀಗ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅತ್ಯಂತ ಗಂಭೀರವಾದ ಮಾತುಗಳನ್ನು ದಾಖಲಿಸಿದೆ. ಹೀಗಿರುವಾಗ  ವೆಂಕಟೇಶ ಪ್ರಸನ್ನರಂತಹ ಅಧಿಕಾರಿಯನ್ನು ಎಸ್​ಐಟಿಯಲ್ಲಿ ಯಾಕೆ ಸೇರಿಸಲಾಯಿತು ? 2026ರ ಸೆಪ್ಟೆಂಬರ್...

Soujanya Case: Who Were the Officials Who, According to the Supreme Court, ‘Benefited’ the Real Perpetrators?
Post

ಸೌಜನ್ಯ ಪ್ರಕರಣ : ಸುಪ್ರೀಂ ಕೋರ್ಟ್ ಪ್ರಕಾರ ನೈಜ ಆರೋಪಿಗಳಿಂದ ‘ಲಾಭ’ ಪಡೆದ ಅಧಿಕಾರಿಗಳು ಯಾರು ?

ತನಿಖೆಯ ವೈಫಲ್ಯವೇ ತನಿಖಾಧಿಕಾರಿಗಳಿಗೆ ‘ಪ್ರೀಮಿಯಂ’ ಒದಗಿಸಿತು ! ಸುಪ್ರೀಂ ಕೋರ್ಟ್ ತೀರ್ಪಿನಲ್ಲಿರುವ ಯಾರೂ ಗಮನಿಸದ ಪ್ರಶ್ನೆ – ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೇವಲ “ಮರುತನಿಖೆಗೆ ಆದೇಶ” ಎಂದು ಓದಿದರೆ ಈ ತೀರ್ಪಿನ ಅರ್ಧಕ್ಕಿಂತಲೂ ಕಡಿಮೆ ಅರ್ಥ ಮಾತ್ರ ನಮಗೆ ಸಿಗುತ್ತದೆ. ಈ ತೀರ್ಪಿನ ನಿಜವಾದ ಮಹತ್ವ ಮತ್ತೊಂದು ಕಡೆ ಇದೆ. ನ್ಯಾಯಾಲಯವು ತನಿಖೆಯಲ್ಲಿನ ಲೋಪಗಳನ್ನು ಪಟ್ಟಿ ಮಾಡಿರುವುದಷ್ಟೇ ಅಲ್ಲ, ಆ ಲೋಪಗಳ ಪರಿಣಾಮವಾಗಿ ನ್ಯಾಯ ವ್ಯವಸ್ಥೆಯ ಮೇಲೆಯೇ ಯಾವ...

Post

ಸೌಜನ್ಯ ಚೂಡಿದಾರ್‌ನಲ್ಲಿದ್ದ ಅಪರಿಚಿತನ ಕೂದಲು ಈಗಲೂ DNA ಸಾಕ್ಷಿ! ಮೂರು ವಾರದಲ್ಲಿ ಸಿಕ್ಕಿದೆ 8 ಸಾಕ್ಷಿಗಳು ! ಸುಪ್ರೀಂಕೋರ್ಟ್‌ ತೀರ್ಪಿನ ಸ್ಫೋಟಕ ಗಮನಾರ್ಹ ಅಂಶಗಳು

ನವೀನ್ ಸೂರಿಂಜೆ ಧರ್ಮಸ್ಥಳದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 2012ರಿಂದ ಬೆಳ್ತಂಗಡಿ ಪೊಲೀಸರು, ಕರ್ನಾಟಕ CID ಮತ್ತು CBI ನಡೆಸಿದ ತನಿಖೆಗಳಲ್ಲಿದ್ದ ಗಂಭೀರ ಲೋಪಗಳನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲೆಗಳ ಆಧಾರದ ಮೇಲೆ ಎತ್ತಿಹಿಡಿದಿದೆ. ಇದಕ್ಕಿಂತಲೂ ಮುಖ್ಯವಾಗಿ, ತನಿಖೆ ಮುಗಿದು 14 ವರ್ಷಗಳಾದರೂ ಕೆಲವು ಸಾಕ್ಷ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ನ್ಯಾಯಾಲಯವೇ ಪತ್ತೆಹಚ್ಚಿದೆ. ಸೌಜನ್ಯ ಚೂಡಿದಾರ್​ ನಲ್ಲಿ ಸಂತೋಷ್​​ ರಾವ್ಅವರದ್ದು ಅಲ್ಲದ...

ಕರಾವಳಿಯ ಹಿಂದುತ್ವ ರಕ್ಷಣೆಯ ಸಭೆ 'ಬಾರ್'ಗಳಲ್ಲಿ ನಡೆಯುತ್ತೆ ! ಕೋರ್ಟ್ ದಾಖಲೆಯಲ್ಲಿದೆ ಸ್ಫೋಟಕ ಅಂಶಗಳು
Post

ಕರಾವಳಿಯ ಹಿಂದುತ್ವ ರಕ್ಷಣೆಯ ಸಭೆ ‘ಬಾರ್’ಗಳಲ್ಲಿ ನಡೆಯುತ್ತೆ ! ಕೋರ್ಟ್ ದಾಖಲೆಯಲ್ಲಿದೆ ಸ್ಫೋಟಕ ಅಂಶಗಳು!

ನವೀನ್ ಸೂರಿಂಜೆ ಕೋಮುಗಲಭೆ, ಪ್ರತಿಕಾರದ ಕೊಲೆಗಳು, ಹಿಂದುತ್ವದ ರಕ್ಷಣೆ, ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಗಳ ಬಗ್ಗೆ ಚರ್ಚೆಗಳು ಆರ್‌ಎಸ್‌ಎಸ್‌ನ ಬೈಠಕ್‌ಗಳಲ್ಲಿ, ಶಾಖೆಗಳಲ್ಲಿ ನಡೆಯುತ್ತವೆ ಎಂದು ಸಾಮಾನ್ಯವಾಗಿ ಅಂದುಕೊಳ್ಳಲಾಗುತ್ತದೆ. ಆದರೆ ಕರಾವಳಿಯ ಹಿಂದುತ್ವ ರಾಜಕಾರಣದ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ದಾಖಲೆಗಳನ್ನು ಗಮನಿಸಿದರೆ, ಕಥೆ ಸ್ವಲ್ಪ ಭಿನ್ನವಾಗಿ ಕಾಣಿಸುತ್ತದೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಪಿತೂರಿಯ ಸಭೆಗಳು ಶಾಖೆಗಳಲ್ಲಿ ಮಾತ್ರವಲ್ಲ, ಬಾರ್‌ಗಳಲ್ಲೂ ನಡೆದಿವೆ ಎಂಬ ಆರೋಪಗಳು ಪೊಲೀಸ್ ಚಾರ್ಜ್‌ಶೀಟ್ ಮತ್ತು ನ್ಯಾಯಾಲಯದ ದಾಖಲೆಗಳಲ್ಲಿ ದಾಖಲಾಗಿವೆ. ಕೊಳ್ತಮಜಲು ರೆಹಮಾನ್ ಕೊಲೆ ಪ್ರಕರಣದಲ್ಲಿ...

ಫಹಾದ್ ಭಯೋತ್ಪಾದಕನೇ ? ತನಿಖಾಧಿಕಾರಿಯ ಕ್ರಾಸ್ ಎಕ್ಸಾಮಿನೇಶನ್ ಏನು ಹೇಳುತ್ತದೆ ?
Post

ಫಹಾದ್ ಭಯೋತ್ಪಾದಕನೇ ? ತನಿಖಾಧಿಕಾರಿಯ ಕ್ರಾಸ್ ಎಕ್ಸಾಮಿನೇಶನ್ ಏನು ಹೇಳುತ್ತದೆ ?

–          ನವೀನ್ ಸೂರಿಂಜೆ ಫಹಾದ್ ಎಂಬ 24 ವರ್ಷದ ಯುವಕನನ್ನು ಮೈಸೂರು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ 2006 ರಂದು ಅರೆಸ್ಟ್ ಮಾಡಿದ್ದರು. ಆತನ ಸಹಚರರು ಎಂದು ಹೇಳಿ ಇನ್ನಿಬ್ಬರನ್ನು ಅರೆಸ್ಟ್ ಮಾಡಿದ್ದರು. ಫಹಾದ್ ಬಳಿ ಎಕೆ-47 ಕೂಡಾ ವಶಪಡಿಸಿಕೊಂಡು ಚಾರ್ಜ್ಶೀಟ್ ದಾಖಲಿಸಿದ್ದರು. ಫಹಾದ್ ಎಂಬ ಈ ಯುವಕ ಪಾಕಿಸ್ತಾನದವನು. ಆತನ ತಾಯಿ ಮೂಲತಹ ಕೇರಳದವರು. ಮೈಸೂರು-ಕೇರಳದ ಗಡಿಗಳಲ್ಲಿ ಸಂಬಂಧಿಕರನ್ನು ಹೊಂದಿರುವ ಫಹಾದ್ ತನ್ನ ಸಂಬಂಧಿಕರನ್ನು ಕಾಣಲು ಮೈಸೂರಿಗೆ ಬಂದಿದ್ದನು. ಇಲ್ಲಿಯೇ ಸಂಬಂಧಿಕ ಹುಡುಗಿಯೊಬ್ಬಳ ಜೊತೆ ಪ್ರೇಮಾಂಕುರವಾಗಿ ಮೈಸೂರಿನಲ್ಲೇ ಉಳಿಯಬೇಕು...

Post

ಎರಡು ವರ್ಷದ ಸಿಎಂ ಅವಧಿಯಲ್ಲಿ ಬಿಸಿನೆಸ್ ಮತ್ತು ಸರ್ಕಾರಿ ಕೆಲಸಕ್ಕಾಗಿ ಫಾರಿನ್ ಟೂರ್ ಮಾಡ್ತಾರಾ ಡಿಕೆಶಿ ! ಇದು ನೈತಿಕ ಸಂಘರ್ಷದ ಪ್ರಶ್ನೆಯಲ್ಲವೇ? ನ್ಯಾಯಾಲಯದ ಆದೇಶದಲ್ಲಿ ಏನಿದೆ?

–          ನವೀನ್ ಸೂರಿಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳ ಮಧ್ಯೆ ಡಿ ಕೆ ಶಿವಕುಮಾರ್ ಅವರು ಐಟಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ‘ತಮ್ಮ ವೈಯಕ್ತಿಕ ವ್ಯವಹಾರಗಳ ಅಭಿವೃದ್ಧಿ ಹಾಗೂ ರಾಜ್ಯದ ಆಡಳಿತಾತ್ಮಕ ಕಾರ್ಯಗಳ ನಿಮಿತ್ತ ಎರಡು ವರ್ಷಗಳ ಕಾಲ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ’ 2026 ಮೇ 14 ರಂದು ಅರ್ಜಿ ಸಲ್ಲಿಸಿದ್ದಾರೆ. ಡಿ ಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆಯು IT Act 278, 277 ಮತ್ತು IPC U/s 193, , 199, 120B ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಬೆಂಗಳೂರಿನ ನ್ಯಾಯಾಲಯದಲ್ಲಿ...