ನವೀನ್ ಸೂರಿಂಜೆ ಧರ್ಮಸ್ಥಳದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 2012ರಿಂದ ಬೆಳ್ತಂಗಡಿ ಪೊಲೀಸರು, ಕರ್ನಾಟಕ CID ಮತ್ತು CBI ನಡೆಸಿದ ತನಿಖೆಗಳಲ್ಲಿದ್ದ ಗಂಭೀರ ಲೋಪಗಳನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲೆಗಳ ಆಧಾರದ ಮೇಲೆ ಎತ್ತಿಹಿಡಿದಿದೆ. ಇದಕ್ಕಿಂತಲೂ ಮುಖ್ಯವಾಗಿ, ತನಿಖೆ ಮುಗಿದು 14 ವರ್ಷಗಳಾದರೂ ಕೆಲವು ಸಾಕ್ಷ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ನ್ಯಾಯಾಲಯವೇ ಪತ್ತೆಹಚ್ಚಿದೆ. ಸೌಜನ್ಯ ಚೂಡಿದಾರ್ ನಲ್ಲಿ ಸಂತೋಷ್ ರಾವ್ಅವರದ್ದು ಅಲ್ಲದ...