– ನವೀನ್ ಸೂರಿಂಜೆ ”ನನ್ನ ಮೇಲೆ ಕೇಸ್ ಹಾಕೋಕೆ ಹೊರಟಿದ್ದಾರೆ. ಇದು ನನಗೆ ದೊಡ್ಡ ವಿಷಯ ಅಲ್ಲ. ಈ ಕೇಸ್ ನನ್ನ ಕೂದಲಿಗೆ ಸಮ” ಸೆಪ್ಟೆಂಬರ್ 28ರಂದು ಬಿ.ಸಿ.ರೋಡ್‌ನಲ್ಲಿ ನಡೆದ ‘ಚಲೋ’ ಪ್ರತಿಭಟನೆಯ ಬಳಿಕ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾಧ್ಯಮಗಳ ಮುಂದೆ ಆಡಿದ ಮಾತು ಇದು. ಆದರೆ ಇದೇ ಪ್ರಭಾಕರ ಭಟ್ ಅವರ ಕಾನೂನು ಹೋರಾಟದ ಇತಿಹಾಸವನ್ನು ನ್ಯಾಯಾಲಯದ ದಾಖಲೆಗಳ ಮೂಲಕ ನೋಡಿದಾಗ ಚಿತ್ರಣ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಪೊಲೀಸರ ಪ್ರಕರಣಗಳು “ಕೂದಲಿಗೆ ಸಮ”...
