– ನವೀನ್ ಸೂರಿಂಜೆ ತನ್ನ ಹಿಂದೂ ಗೆಳೆಯನ ತಂದೆಗೆ ರಕ್ತದಾನ ಮಾಡಿದ್ದ ಕೊಳ್ತಮಜಲು ರೆಹಮಾನ್‌ನನ್ನು ಅದೇ ಹಿಂದೂ ಗೆಳೆಯ ಭಜರಂಗದಳದ ಜೊತೆ ಸೇರಿಕೊಂಡು ಮನೆಗೆ ಕರೆಯಿಸಿ ಕೊಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಆರೋಪಿಗಳಿಗೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಭೀಕರ ಕೊಲೆ ಪ್ರಕರಣದಲ್ಲಿ ಆರೋಪಿಗಳು ಜಾಮೀನು ಪಡೆದಿರುವುದು ಸಹಜವಾಗಿಯೇ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಕೋಕಾ ಕಾಯ್ದೆ ಅನ್ವಯಿಸಿದ್ದರೂ ಜಾಮೀನು ಹೇಗೆ ಸಿಕ್ಕಿತು? ಪೊಲೀಸರು ಸಲ್ಲಿಸಿದ ಸಾಕ್ಷ್ಯಗಳಲ್ಲಿ ಏನು ಕೊರತೆಯಿತ್ತು? ಸರ್ಕಾರಿ ವಕೀಲರು...
Author: hirolaits@gmail.com
ಎಫ್ಐಆರ್ಗಳೇ ಇಲ್ಲದೇ ಆರ್ಎಸ್ಎಸ್ ಗಲಭೆಯನ್ನು ಹೇಗೆ ರೂಪಿಸುತ್ತೆ ? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಯ ಅಸಲಿಯತ್ತೇನು?
ಆರ್ಎಸ್ಎಸ್ ಸಂಘಟನೆಯ ವಿರುದ್ಧ ದಾಖಲಾದ ಪ್ರಕರಣವೆಷ್ಟು ? ಸದರೀ ಸಂಘಟನೆಯು ಯಾವುದಾದರೂ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದೆಯೇ ? ರಾಜ್ಯದಲ್ಲಿ ಸದರಿ ಸಂಘಟನೆಯ ಪಥ ಸಂಚಲನ ಅಥವಾ ಶಾಖೆ ನಡೆಸುವ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ಜರುಗಿದ ಪ್ರಕರಣಗಳು ಬೆಳಕಿಗೆ ಬಂದಿವೆಯೇ ? ಎಂದು ವಿಧಾನಪರಿಷತ್ತಿನಲ್ಲಿ ನಾರಾಯಣಸ್ವಾಮಿ ಅನ್ ಸ್ಟಾರ್ಡ್ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ‘ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ’ ಎಂಬ ಒಂದು ವಾಕ್ಯದ ಲಿಖಿತ ಉತ್ತರ ಒದಗಿಸಿದ್ದಾರೆ. ಈ ತಾಂತ್ರಿಕ ಪ್ರಶ್ನೆ-...
ಹನೂರಿಗೆ ಎಸ್‌ಐಟಿ ಬೇಕು: ಬಿಜೆಪಿ ಸರ್ಕಾರದ ಬೇಟೆಗಾರರ ಶೂಟೌಟ್‌ಗಳ ತನಿಖೆಗೂ ಸಿದ್ಧವೇ?
ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ, ಬೇಟೆಗಾರರ ಮೇಲಿನ ಗುಂಡಿನ ದಾಳಿಯನ್ನು ಸಮರ್ಥಿಸಿ, ವಿರೋಧ ಪಕ್ಷದಲ್ಲಿದ್ದಾಗ ಅದನ್ನೇ ಖಂಡಿಸುವುದು ರಾಜಕೀಯದ ಸೋಗಲಾಡಿತನವಾಗಿದೆ. ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ, ಜೆಡಿಎಸ್ ಆಗಲಿ, ಯಾವ ಸರ್ಕಾರದ ಅವಧಿಯಲ್ಲೇ ನಡೆದಿದ್ದರೂ ನಾಗರಿಕರ ಸಾವಿಗೆ ಉತ್ತರದಾಯಿತ್ವ ರಾಜ್ಯದ ಮೇಲಿದೆ. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಕ್ಕಿಂತ ಸತ್ಯಶೋಧನೆ, ಸ್ವತಂತ್ರ ತನಿಖೆ ಮತ್ತು ನ್ಯಾಯವೇ ಮುಖ್ಯ. ಖಾಕಿಗಳು ನಡೆಸುವ ಗುಂಡಿನ ದಾಳಿಯ ವಿಷಯದಲ್ಲಿ ಕಾಂಗ್ರೆಸ್ ಬಿಜೆಪಿ ಎಂಬ ವ್ಯತ್ಯಾಸಗಳು ಇರುವುದಿಲ್ಲ. 2026 ಆಗಸ್ಟ್ 15ರಂದು ಚಾಮರಾಜನಗರ ಜಿಲ್ಲೆಯ...
ಫಹಾದ್ ಭಯೋತ್ಪಾದಕನೇ ? ತನಿಖಾಧಿಕಾರಿಯ ಕ್ರಾಸ್ ಎಕ್ಸಾಮಿನೇಶನ್ ಏನು ಹೇಳುತ್ತದೆ ?
– ನವೀನ್ ಸೂರಿಂಜೆ ಫಹಾದ್ ಎಂಬ 24 ವರ್ಷದ ಯುವಕನನ್ನು ಮೈಸೂರು ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ 2006 ರಂದು ಅರೆಸ್ಟ್ ಮಾಡಿದ್ದರು. ಆತನ ಸಹಚರರು ಎಂದು ಹೇಳಿ ಇನ್ನಿಬ್ಬರನ್ನು ಅರೆಸ್ಟ್ ಮಾಡಿದ್ದರು. ಫಹಾದ್ ಬಳಿ ಎಕೆ-47 ಕೂಡಾ ವಶಪಡಿಸಿಕೊಂಡು ಚಾರ್ಜ್ಶೀಟ್ ದಾಖಲಿಸಿದ್ದರು. ಫಹಾದ್ ಎಂಬ ಈ ಯುವಕ ಪಾಕಿಸ್ತಾನದವನು. ಆತನ ತಾಯಿ ಮೂಲತಹ ಕೇರಳದವರು. ಮೈಸೂರು-ಕೇರಳದ ಗಡಿಗಳಲ್ಲಿ ಸಂಬಂಧಿಕರನ್ನು ಹೊಂದಿರುವ ಫಹಾದ್ ತನ್ನ ಸಂಬಂಧಿಕರನ್ನು ಕಾಣಲು ಮೈಸೂರಿಗೆ ಬಂದಿದ್ದನು. ಇಲ್ಲಿಯೇ ಸಂಬಂಧಿಕ ಹುಡುಗಿಯೊಬ್ಬಳ ಜೊತೆ ಪ್ರೇಮಾಂಕುರವಾಗಿ ಮೈಸೂರಿನಲ್ಲೇ ಉಳಿಯಬೇಕು...
ಕೋಮುವಾದದ ವಿರುದ್ಧ ನಿಜಕ್ಕೂ ಸಿದ್ದರಾಮಯ್ಯ ಏಕಾಂತ ಹೋರಾಟ ನಡೆಸಿದ್ದಾರೆಯೇ ? ನ್ಯಾಯಾಂಗದ ದಾಖಲೆಗಳು ಏನು ಹೇಳುತ್ತವೆ ?
ಎರಡು ವರ್ಷದ ಸಿಎಂ ಅವಧಿಯಲ್ಲಿ ಬಿಸಿನೆಸ್ ಮತ್ತು ಸರ್ಕಾರಿ ಕೆಲಸಕ್ಕಾಗಿ ಫಾರಿನ್ ಟೂರ್ ಮಾಡ್ತಾರಾ ಡಿಕೆಶಿ ! ಇದು ನೈತಿಕ ಸಂಘರ್ಷದ ಪ್ರಶ್ನೆಯಲ್ಲವೇ? ನ್ಯಾಯಾಲಯದ ಆದೇಶದಲ್ಲಿ ಏನಿದೆ?
– ನವೀನ್ ಸೂರಿಂಜೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆಗಳ ಮಧ್ಯೆ ಡಿ ಕೆ ಶಿವಕುಮಾರ್ ಅವರು ಐಟಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ‘ತಮ್ಮ ವೈಯಕ್ತಿಕ ವ್ಯವಹಾರಗಳ ಅಭಿವೃದ್ಧಿ ಹಾಗೂ ರಾಜ್ಯದ ಆಡಳಿತಾತ್ಮಕ ಕಾರ್ಯಗಳ ನಿಮಿತ್ತ ಎರಡು ವರ್ಷಗಳ ಕಾಲ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ’ 2026 ಮೇ 14 ರಂದು ಅರ್ಜಿ ಸಲ್ಲಿಸಿದ್ದಾರೆ. ಡಿ ಕೆ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆಯು IT Act 278, 277 ಮತ್ತು IPC U/s 193, , 199, 120B ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು ಬೆಂಗಳೂರಿನ ನ್ಯಾಯಾಲಯದಲ್ಲಿ...
‘ಬಿಡದಿ ಟೌನ್ಶಿಪ್ಗೆ ಭೂಸ್ವಾಧೀನ ಮಾಡಿದ್ರೆ ಮುಂದಿನ ಎಲೆಕ್ಷನ್ನಲ್ಲಿ ಡಿಕೆಶಿ ಢಮಾರ್ !’ ಖುದ್ದು ಡಿ ಕೆ ಶಿವಕುಮಾರ್ ಅಂದು ಹೇಳಿದ್ದೇನು ?
ರೈತರ ಭಾರೀ ವಿರೋಧಕ್ಕೆ ಕಾರಣವಾಗಿರುವ ‘ಬಿಡದಿ ಟೌನ್ ಶಿಪ್ ಭೂಸ್ವಾಧೀನ’ ವಿರುದ್ಧ ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರೈತರ ಯಾವ ಪ್ರತಿಭಟನೆಯನ್ನೂ ಗಣನೆಗೆ ತೆಗೆದುಕೊಳ್ಳದೇ, ಭೂಸ್ವಾಧೀನ ಮಾಡಿಯೇ ಸಿದ್ದ ಎಂದರ್ಥದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆಗಳನ್ನುಕೊಡುತ್ತಿದ್ದಾರೆ. ರೈತರ ವಿರುದ್ಧ ಡಿ ಕೆ ಶಿವಕುಮಾರ್ ಯುದ್ಧ ಸಾರಿರುವಂತೆ ಮಾತನಾಡುತ್ತಿದ್ದಾರೆ. ಬಿಡದಿ ಟೌನ್ ಶಿಪ್ ಯೋಜನೆ ಹೆಚ್ ಡಿ ಕುಮಾರಸ್ವಾಮಿಯವರ ರಿಯಲ್ ಎಸ್ಟೇಟ್ ಯೋಜನೆಯಾಗಿತ್ತು. 3 ಫೆಬ್ರವರಿ 2006 ರಿಂದ 8 ಅಕ್ಟೋಬರ್...


