ನವೀನ್ ಸೂರಿಂಜೆ ಕೋಮುಗಲಭೆ, ಪ್ರತಿಕಾರದ ಕೊಲೆಗಳು, ಹಿಂದುತ್ವದ ರಕ್ಷಣೆ, ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಗಳ ಬಗ್ಗೆ ಚರ್ಚೆಗಳು ಆರ್‌ಎಸ್‌ಎಸ್‌ನ ಬೈಠಕ್‌ಗಳಲ್ಲಿ, ಶಾಖೆಗಳಲ್ಲಿ ನಡೆಯುತ್ತವೆ ಎಂದು ಸಾಮಾನ್ಯವಾಗಿ ಅಂದುಕೊಳ್ಳಲಾಗುತ್ತದೆ. ಆದರೆ ಕರಾವಳಿಯ ಹಿಂದುತ್ವ ರಾಜಕಾರಣದ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ದಾಖಲೆಗಳನ್ನು ಗಮನಿಸಿದರೆ, ಕಥೆ ಸ್ವಲ್ಪ ಭಿನ್ನವಾಗಿ ಕಾಣಿಸುತ್ತದೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಪಿತೂರಿಯ ಸಭೆಗಳು ಶಾಖೆಗಳಲ್ಲಿ ಮಾತ್ರವಲ್ಲ, ಬಾರ್‌ಗಳಲ್ಲೂ ನಡೆದಿವೆ ಎಂಬ ಆರೋಪಗಳು ಪೊಲೀಸ್ ಚಾರ್ಜ್‌ಶೀಟ್ ಮತ್ತು ನ್ಯಾಯಾಲಯದ ದಾಖಲೆಗಳಲ್ಲಿ ದಾಖಲಾಗಿವೆ. ಕೊಳ್ತಮಜಲು ರೆಹಮಾನ್ ಕೊಲೆ ಪ್ರಕರಣದಲ್ಲಿ...
