ಕೆಜಿಎಫ್ನ ಬೆಮೆಲ್ ಕಾರ್ಖಾನೆಯಲ್ಲಿ ಹಲವು ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಮಹತ್ವದ ನ್ಯಾಯ ದೊರೆತಿದೆ. ಬೆಮೆಲ್ನ ನೇರ ಉದ್ಯೋಗಿಗಳು ಮಾಡುತ್ತಿರುವ ಅದೇ ಅಥವಾ ಸಮಾನ ಸ್ವರೂಪದ ಕೆಲಸವನ್ನು ಮಾಡುತ್ತಿರುವ ಗುತ್ತಿಗೆ ಕಾರ್ಮಿಕರಿಗೂ ಅದೇ ವೇತನ ಶ್ರೇಣಿ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆಯ ಪ್ರಾಧಿಕಾರ ಆದೇಶಿಸಿದೆ. ಈ ಆದೇಶದಿಂದ 81 ಗುತ್ತಿಗೆ ಆಪರೇಟರ್ಗಳ ವೇತನದಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆ ಇದ್ದು, ಇದುವರೆಗೆ ಸುಮಾರು 18 ಸಾವಿರ ರೂ. ಆಸುಪಾಸಿನಲ್ಲಿ ವೇತನ ಪಡೆಯುತ್ತಿದ್ದ ಕಾರ್ಮಿಕರ ವೇತನ...
Category: ಲೇಖನಗಳು
ಆರ್ಎಸ್ಎಸ್ ರುದ್ರೇಶ್ ಕೊಲೆಗೆ ನಿಜಕ್ಕೂ ಮಚ್ಚು ಬಳಸಲಾಗಿತ್ತೇ ? ಎಸ್ ಬಾಲನ್ ಕ್ರಾಸ್ ಎಕ್ಸಾಮಿನೇಶನ್ ಬಯಲು ಮಾಡಿದ ‘ಟೆರರ್ ಸತ್ಯ’ಗಳು !
– ನವೀನ್ ಸೂರಿಂಜೆ ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣವು 2016ರ ಅಕ್ಟೋಬರ್ 16ರಂದು ಬೆಂಗಳೂರು ನಗರದ ಶಿವಾಜಿನಗರದ ಕಮರ್ಷಿಯಲ್ ಸ್ಟ್ರೀಟ್ ಬಳಿ ನಡೆದಿತ್ತು. ಆರ್ಎಸ್ಎಸ್ ಪಥಸಂಚಲನ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ರುದ್ರೇಶ್ ಅವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿದರು. ಸ್ಥಳೀಯ ಪೊಲೀಸರು ನಡೆಸುತ್ತಿದ್ದ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (NIA) ವಹಿಸಿಕೊಂಡಿದ್ದು, ಇದು ಭಯೋತ್ಪಾದನಾ ಕೃತ್ಯ ಹಾಗೂ ದೊಡ್ಡ ಸಂಚು ಎಂದು ಆರೋಪಿಸಿದೆ. ಒಂದು ಕೊಲೆಯನ್ನು ‘ಭಯೋತ್ಪಾದನಾ ಕೃತ್ಯ’ ಎಂದು...
ಎಂಆರ್ ಪಿಎಲ್ ಸ್ಪೋಟದ ಸಾವು-ನೋವುಗಳಿಗೆ ಶಾಸಕ ಡಾ ವೈ ಭರತ್ ಶೆಟ್ಟಿ ಹೊಣೆ ಹೊರಬೇಕಲ್ಲವೇ ? ವಿಧಾನಸಭೆ ದಾಖಲೆಗಳು ಏನು ಹೇಳುತ್ತವೆ ?
– ನವೀನ್ ಸೂರಿಂಜೆ ಎಂಅರ್ ಪಿಎಲ್ ನಲ್ಲಿ ಸೆಪ್ಟೆಂಬರ್ 30 ರಂದು ಬುಧವಾರ ನಡೆದ ಸ್ಪೋಟ, ಸಾವು ನೋವುಗಳ ಬಗ್ಗೆ ಎಲ್ಲರೂ ಲೊಚಗುಟ್ಟುತ್ತಾರೆ. ಮಂಗಳೂರು ಬೋಪಾಲ್ ಆಗಬಹುದು ಎಂದು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಹೊಣೆಗಾರಿಕೆ ವಹಿಸಲು ಯಾರೂ ಸಿದ್ದರಿಲ್ಲ. ಎಂಆರ್ಪಿಎಲ್ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡದ ಶಾಸಕರೂ ಇದಕ್ಕೆ ಜವಾಬ್ದಾರಿಯಲ್ಲವೇ ? ಎಂಆರ್ ಪಿಎಲ್ ದುರಂತದ ನೇರ ಹೊಣೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ ವೈ ಭರತ್ ಶೆಟ್ಟಿಯವರು ಹೊತ್ತುಕೊಳ್ಳಬೇಕು. ಅದಕ್ಕೆ ಕಾರಣ ಅವರು ಎಂಆರ್ ಪಿಎಲ್...
ಸುಪ್ರಿಂ ತೀರ್ಪಿನ ಆಧಾರದಲ್ಲಿ ರಾಜ್ಯ ಸರ್ಕಾರವು ಸೌಜನ್ಯ ಹೋರಾಟಗಾರರ ಕೇಸ್ ರದ್ದು ಮಾಡುತ್ತಾ ? ಸೌಜನ್ಯ ಪರ ಹೋರಾಟದ ಬಗ್ಗೆ ಸುಪ್ರಿಂ ಕೋರ್ಟ್ ಹೇಳಿದ್ದೇನು?
– ನವೀನ್ ಸೂರಿಂಜೆ ಸೌಜನ್ಯ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ಕೇವಲ ‘ಹೊಸ ಎಸ್ಐಟಿ ರಚಿಸಿ’ ಎಂದಷ್ಟೇ ಹೇಳಿ ಕೈತಿಳೆದುಕೊಂಡಿಲ್ಲ. ಸೌಜನ್ಯ ಪ್ರಕರಣದ ಇಂಚಿಂಚನ್ನೂ ಶೋಧಿಸಿರುವ ಸುಪ್ರಿಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಹಲವು ನೇರ, ಹಲವು ಪರೋಕ್ಷ ಸೂಚನೆಗಳನ್ನು ನೀಡಿದೆ. ತೀರ್ಪಿನಲ್ಲಿರುವ ನೇರ ಸೂಚನೆಗಳು ಆದೇಶದ ರೂಪದಲ್ಲಿದ್ದರೆ, ಪರೋಕ್ಷ ಸೂಚನೆಗಳು ‘ಅಭಿಪ್ರಾಯ, ದೂರುದಾರರ ಅರ್ಜಿಯ ಉಲ್ಲೇಖ, ಬೇರೆಬೇರೆ ತೀರ್ಪುಗಳ ಉಲ್ಲೇಖ’ದ ರೂಪದಲ್ಲಿವೆ. ಸುಪ್ರಿಂ ಕೋರ್ಟ್ನ ಈ ಐತಿಹಾಸಿಕ ತೀರ್ಪಿನಲ್ಲಿ ಸೌಜನ್ಯ ಪರ ನಡೆದ ಹೋರಾಟವನ್ನು ಉಲ್ಲೇಖಿಸಿದೆ. ಹಾಗಾಗಿ ರಾಜ್ಯ...
ದೂರು, ಆದೇಶವೇ ಇಲ್ಲದೇ ಸೌಜನ್ಯ ಪರ ಹೋರಾಟಗಾರರ ವಿರುದ್ಧ ಸ್ವಯಂ ತನಿಖೆ ನಡೆಸಿದ್ದ ಎನ್. ಶಶಿಕುಮಾರ್!
ಸುಪ್ರೀಂ ಕೋರ್ಟ್ ತೀರ್ಪಿನ ‘associated’ ಪದದ ವ್ಯಾಪ್ತಿಗೆ ಎಸ್ಐಟಿ SIT ಮುಖ್ಯಸ್ಥರು ಒಳಪಡುತ್ತಾರೆಯೇ? – ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಹೊಸ ಎಸ್ಐಟಿ ಹೇಗಿರಬೇಕು ಎಂದು ಸ್ಪಷ್ಟ ಆದೇಶ ನೀಡಿದೆ. ಹೊಸದಾಗಿ ರಚಿಸಲ್ಪಡುವ Special Investigation Team ಹೇಗಿರಬೇಕು, ಹಿಂದಿನ ತನಿಖೆಯೊಂದಿಗೆ ಸಂಬಂಧ ಹೊಂದಿದ್ದ ಅಧಿಕಾರಿಗಳ ಪಾತ್ರವೇನು ಮತ್ತು ಹೊಸ ತನಿಖೆಯ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ...
ಸೌಜನ್ಯ ಪ್ರಕರಣ : ಸುಪ್ರೀಂ ಕೋರ್ಟ್ ಪ್ರಕಾರ ನೈಜ ಆರೋಪಿಗಳಿಂದ ‘ಲಾಭ’ ಪಡೆದ ಅಧಿಕಾರಿಗಳು ಯಾರು ?
ತನಿಖೆಯ ವೈಫಲ್ಯವೇ ತನಿಖಾಧಿಕಾರಿಗಳಿಗೆ ‘ಪ್ರೀಮಿಯಂ’ ಒದಗಿಸಿತು ! ಸುಪ್ರೀಂ ಕೋರ್ಟ್ ತೀರ್ಪಿನಲ್ಲಿರುವ ಯಾರೂ ಗಮನಿಸದ ಪ್ರಶ್ನೆ – ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೇವಲ “ಮರುತನಿಖೆಗೆ ಆದೇಶ” ಎಂದು ಓದಿದರೆ ಈ ತೀರ್ಪಿನ ಅರ್ಧಕ್ಕಿಂತಲೂ ಕಡಿಮೆ ಅರ್ಥ ಮಾತ್ರ ನಮಗೆ ಸಿಗುತ್ತದೆ. ಈ ತೀರ್ಪಿನ ನಿಜವಾದ ಮಹತ್ವ ಮತ್ತೊಂದು ಕಡೆ ಇದೆ. ನ್ಯಾಯಾಲಯವು ತನಿಖೆಯಲ್ಲಿನ ಲೋಪಗಳನ್ನು ಪಟ್ಟಿ ಮಾಡಿರುವುದಷ್ಟೇ ಅಲ್ಲ, ಆ ಲೋಪಗಳ ಪರಿಣಾಮವಾಗಿ ನ್ಯಾಯ ವ್ಯವಸ್ಥೆಯ ಮೇಲೆಯೇ ಯಾವ...
ಸೌಜನ್ಯ ಪ್ರಕರಣ ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ ಎಂದ ಸುಪ್ರಿಂ ಕೋರ್ಟ್ ! ಸೌಜನ್ಯಗೆ ಪೊಲೀಸರು ಅನ್ಯಾಯ ಮಾಡಿದರು ! ನಿಜವಾದ ಆರೋಪಿಗಳು ತನಿಖೆಯ ದಾರಿ ತಪ್ಪಿಸಿದರು: ಸುಪ್ರೀಂ ತೀರ್ಪಿನ ಸ್ಫೋಟಕ ಮಾಹಿತಿ
– ನವೀನ್ ಸೂರಿಂಜೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 14 ವರ್ಷಗಳ ಹಿಂದೆ ನಡೆದ ಈ ಅಪರಾಧದ ತನಿಖೆಯನ್ನು ವಿವಿಧ ಹಂತಗಳಲ್ಲಿ ನಡೆಸಿದ ರೀತಿಯನ್ನೇ ನ್ಯಾಯಾಲಯ ಅತ್ಯಂತ ಗಂಭೀರವಾಗಿ ಪ್ರಶ್ನಿಸಿದೆ. ಹಿಂದಿನ ತನಿಖೆಯಲ್ಲಿ ಉಳಿದುಹೋಗಿರುವ ಸಾಕ್ಷ್ಯಗಳು, ತನಿಖೆಯಲ್ಲಿನ ಲೋಪಗಳು ಮತ್ತು ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವ ಅವಕಾಶವೇ ಹಾಳಾಗಿರುವ ಸಾಧ್ಯತೆಯ ಬಗ್ಗೆ ಸುಪ್ರೀಂಕೋರ್ಟ್ ದಾಖಲಿಸಿರುವ ಅಭಿಪ್ರಾಯಗಳು ಈ ಪ್ರಕರಣದ ಮುಂದಿನ ತನಿಖೆಗೆ ಮಹತ್ವದ ದಿಕ್ಕು...
ಸೌಜನ್ಯ ಚೂಡಿದಾರ್ನಲ್ಲಿದ್ದ ಅಪರಿಚಿತನ ಕೂದಲು ಈಗಲೂ DNA ಸಾಕ್ಷಿ! ಮೂರು ವಾರದಲ್ಲಿ ಸಿಕ್ಕಿದೆ 8 ಸಾಕ್ಷಿಗಳು ! ಸುಪ್ರೀಂಕೋರ್ಟ್ ತೀರ್ಪಿನ ಸ್ಫೋಟಕ ಗಮನಾರ್ಹ ಅಂಶಗಳು
ನವೀನ್ ಸೂರಿಂಜೆ ಧರ್ಮಸ್ಥಳದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 2012ರಿಂದ ಬೆಳ್ತಂಗಡಿ ಪೊಲೀಸರು, ಕರ್ನಾಟಕ CID ಮತ್ತು CBI ನಡೆಸಿದ ತನಿಖೆಗಳಲ್ಲಿದ್ದ ಗಂಭೀರ ಲೋಪಗಳನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲೆಗಳ ಆಧಾರದ ಮೇಲೆ ಎತ್ತಿಹಿಡಿದಿದೆ. ಇದಕ್ಕಿಂತಲೂ ಮುಖ್ಯವಾಗಿ, ತನಿಖೆ ಮುಗಿದು 14 ವರ್ಷಗಳಾದರೂ ಕೆಲವು ಸಾಕ್ಷ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ನ್ಯಾಯಾಲಯವೇ ಪತ್ತೆಹಚ್ಚಿದೆ. ಸೌಜನ್ಯ ಚೂಡಿದಾರ್ ನಲ್ಲಿ ಸಂತೋಷ್ ರಾವ್ಅವರದ್ದು ಅಲ್ಲದ...
ಕರಾವಳಿಯ ಹಿಂದುತ್ವ ರಕ್ಷಣೆಯ ಸಭೆ ‘ಬಾರ್’ಗಳಲ್ಲಿ ನಡೆಯುತ್ತೆ ! ಕೋರ್ಟ್ ದಾಖಲೆಯಲ್ಲಿದೆ ಸ್ಫೋಟಕ ಅಂಶಗಳು!
ನವೀನ್ ಸೂರಿಂಜೆ ಕೋಮುಗಲಭೆ, ಪ್ರತಿಕಾರದ ಕೊಲೆಗಳು, ಹಿಂದುತ್ವದ ರಕ್ಷಣೆ, ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಗಳ ಬಗ್ಗೆ ಚರ್ಚೆಗಳು ಆರ್ಎಸ್ಎಸ್ನ ಬೈಠಕ್ಗಳಲ್ಲಿ, ಶಾಖೆಗಳಲ್ಲಿ ನಡೆಯುತ್ತವೆ ಎಂದು ಸಾಮಾನ್ಯವಾಗಿ ಅಂದುಕೊಳ್ಳಲಾಗುತ್ತದೆ. ಆದರೆ ಕರಾವಳಿಯ ಹಿಂದುತ್ವ ರಾಜಕಾರಣದ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ದಾಖಲೆಗಳನ್ನು ಗಮನಿಸಿದರೆ, ಕಥೆ ಸ್ವಲ್ಪ ಭಿನ್ನವಾಗಿ ಕಾಣಿಸುತ್ತದೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಪಿತೂರಿಯ ಸಭೆಗಳು ಶಾಖೆಗಳಲ್ಲಿ ಮಾತ್ರವಲ್ಲ, ಬಾರ್ಗಳಲ್ಲೂ ನಡೆದಿವೆ ಎಂಬ ಆರೋಪಗಳು ಪೊಲೀಸ್ ಚಾರ್ಜ್ಶೀಟ್ ಮತ್ತು ನ್ಯಾಯಾಲಯದ ದಾಖಲೆಗಳಲ್ಲಿ ದಾಖಲಾಗಿವೆ. ಕೊಳ್ತಮಜಲು ರೆಹಮಾನ್ ಕೊಲೆ ಪ್ರಕರಣದಲ್ಲಿ...
ತುಳು ಮಾನ್ಯತೆ: ಮಂಗಳೂರು ಉತ್ತರ ಶಾಸಕ ಡಾ ವೈ ಭರತ್ ಶೆಟ್ಟಿ ಸುಳ್ಳುಗಳು !
ತುಳು ಭಾಷೆಗೆ ಕರ್ನಾಟಕದಲ್ಲಿ ಆಡಳಿತಾತ್ಮಕ ಮಾನ್ಯತೆ ದೊರಕಿರುವುದನ್ನು ತುಳುವರು ಪಕ್ಷ ಬೇದ ಮರೆತು ಸ್ವಾಗತಿಸಿದ್ದಾರೆ. ಆದರೆ ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸುವ ಬದಲು, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿಯವರು ನಾಲ್ಕು ಮುಖಗಳ ಫೋಟೋ ಹಾಕಿಕೊಂಡು ಬಸವರಾಜ ಬೊಮ್ಮಾಯಿ, ಸುನಿಲ್ ಕುಮಾರ್, ಮೋಹನ್ ಆಳ್ವ ಅವರ ಹೆಸರಿನಲ್ಲಿ ತುಳು ಮಾನ್ಯತೆಯ ಸಂಪೂರ್ಣ ಕ್ರೆಡಿಟ್ ಹಂಚುವ ಪ್ರಯತ್ನ ಮಾಡಿದ್ದಾರೆ. ವಾಸ್ತವದಲ್ಲಿ ಸುನೀಲ್ ಕುಮಾರ್ ಗೂ, ಮೋಹನ್ ಆಳ್ವ ವರದಿಗೂ ತುಳು ಮಾನ್ಯತೆಗೂ ಸಂಬಂಧವೇ ಇಲ್ಲ !...







