– ನವೀನ್ ಸೂರಿಂಜೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರ ಸಂಬಂಧ ರೌಡಿಶೀಟರ್ ಪುನೀತ್ ಕೆರೆಹಳ್ಳಿ ವಿರುದ್ದ ಬಾಡಿ ವಾರೆಂಟ್ ಜಾರಿಯಾಗಿದೆ. ಪ್ರಕರಣವೊಂದರಲ್ಲಿ ಎ1 ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಮತ್ತೊಂದು ಪ್ರಕರಣದ ವಿಚಾರಣೆ ಸಂಬಂಧ ಬಾಡಿ ವಾರೆಂಟ್ ಹೊರಡಿಸಲಾಗಿದೆ. ಪ್ರಸ್ತುತ ಪುನೀತ್ ಕೆರೆಹಳ್ಳಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿದ್ದು ಬಂಧನದಲ್ಲಿದ್ದು, ಕೈದಿ ನಂ : UTP No.8642/2026 ಯನ್ನು ಹೊಂದಿದ್ದಾರೆ. ಹೀಗಾಗಿ, ಬೇರೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿಯನ್ನು ಬಸವೇಶ್ವರನಗರ ಪೊಲೀಸರು ತಮ್ಮ...
Category: ಅಪರಾಧ
ಸೌಜನ್ಯ ತಾಯಿ ಹೇಳಿದವರನ್ನು ಎಸ್ಐಟಿ ವಿಚಾರಣೆ ನಡೆಸಬೇಕು! ‘ಮೌನ ಸಾಕ್ಷಿ’ಯ ತನಿಖೆಯೂ ಅಗತ್ಯ! ಸುಪ್ರೀಂ ತೀರ್ಪಿನ ಬಹುಮುಖ್ಯ ಭಾಗ
ಸೌಜನ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇಡೀ ದೇಶದ ಪೊಲೀಸರಿಗೆ ಮಾರ್ಗದರ್ಶನ ನೀಡುವ ರೀತಿಯ ‘REPORTABLE’ ತೀರ್ಪು ನೀಡಿದೆ. ಈಗ ಈ ತೀರ್ಪನ್ನು ದೇಶದ ಯಾವುದೇ ಲೈಂಗಿಕ ದೌರ್ಜನ್ಯ, ‘ಅತ್ಯಾಚಾರ-ಕೊಲೆ’ ಪ್ರಕರಣಗಳಿಗೆ ಉಲ್ಲೇಖಿಸಬಹುದು. ಇಂತಹ ಮಹತ್ವದ ತೀರ್ಪಿನಲ್ಲಿ ಯಾರೂ ಗಮನಿಸದ ಕೆಲ ಮುಖ್ಯ ಅಂಶಗಳಿವೆ. ಸುಪ್ರೀಂ ಕೋರ್ಟ್ ತೀರ್ಪಿನ ಪ್ಯಾರಾ 13ರಲ್ಲಿ ಟ್ರಯಲ್ ಕೋರ್ಟ್ ನ್ಯಾಯಾಧೀಶರ ತೀರ್ಪಿನ ಅಂಶಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಅದು ಹೀಗೆ ಹೇಳುತ್ತದೆ: “ಸಾಕ್ಷಿಗಳು ಅಪರಾಧ ಎಸಗಿದ ವ್ಯಕ್ತಿಗಳ ಹೆಸರುಗಳನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಆದರೆ,...
ಕೇಸ್ ಕೂದಲಿಗೆ ಸಮ ಎನ್ನುವ ಪ್ರಭಾಕರ್ ಭಟ್ ಕೋರ್ಟ್ ದಾಖಲೆಗಳು ಏನು ಹೇಳುತ್ತವೆ? ಭಟ್ ಮಾತು ಕೇಳಿ ಜೈಲಲ್ಲಿ ಕೊಳೆಯುತ್ತಿರುವ ಶೂದ್ರ ಯುವಕರು !
– ನವೀನ್ ಸೂರಿಂಜೆ ”ನನ್ನ ಮೇಲೆ ಕೇಸ್ ಹಾಕೋಕೆ ಹೊರಟಿದ್ದಾರೆ. ಇದು ನನಗೆ ದೊಡ್ಡ ವಿಷಯ ಅಲ್ಲ. ಈ ಕೇಸ್ ನನ್ನ ಕೂದಲಿಗೆ ಸಮ” ಸೆಪ್ಟೆಂಬರ್ 28ರಂದು ಬಿ.ಸಿ.ರೋಡ್‌ನಲ್ಲಿ ನಡೆದ ‘ಚಲೋ’ ಪ್ರತಿಭಟನೆಯ ಬಳಿಕ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಮಾಧ್ಯಮಗಳ ಮುಂದೆ ಆಡಿದ ಮಾತು ಇದು. ಆದರೆ ಇದೇ ಪ್ರಭಾಕರ ಭಟ್ ಅವರ ಕಾನೂನು ಹೋರಾಟದ ಇತಿಹಾಸವನ್ನು ನ್ಯಾಯಾಲಯದ ದಾಖಲೆಗಳ ಮೂಲಕ ನೋಡಿದಾಗ ಚಿತ್ರಣ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಪೊಲೀಸರ ಪ್ರಕರಣಗಳು “ಕೂದಲಿಗೆ ಸಮ”...
ದೂರು, ಆದೇಶವೇ ಇಲ್ಲದೇ ಸೌಜನ್ಯ ಪರ ಹೋರಾಟಗಾರರ ವಿರುದ್ಧ ಸ್ವಯಂ ತನಿಖೆ ನಡೆಸಿದ್ದ ಎನ್. ಶಶಿಕುಮಾರ್!
ಸುಪ್ರೀಂ ಕೋರ್ಟ್ ತೀರ್ಪಿನ ‘associated’ ಪದದ ವ್ಯಾಪ್ತಿಗೆ ಎಸ್‌ಐಟಿ SIT ಮುಖ್ಯಸ್ಥರು ಒಳಪಡುತ್ತಾರೆಯೇ? – ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಹೊಸ ಎಸ್ಐಟಿ ಹೇಗಿರಬೇಕು ಎಂದು ಸ್ಪಷ್ಟ ಆದೇಶ ನೀಡಿದೆ. ಹೊಸದಾಗಿ ರಚಿಸಲ್ಪಡುವ Special Investigation Team ಹೇಗಿರಬೇಕು, ಹಿಂದಿನ ತನಿಖೆಯೊಂದಿಗೆ ಸಂಬಂಧ ಹೊಂದಿದ್ದ ಅಧಿಕಾರಿಗಳ ಪಾತ್ರವೇನು ಮತ್ತು ಹೊಸ ತನಿಖೆಯ ಸ್ವಾತಂತ್ರ್ಯವನ್ನು ಹೇಗೆ ಕಾಪಾಡಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ...
ಕೊಲೆ, ಭ್ರಷ್ಟಾಚಾರ ಆರೋಪದ ಅಧಿಕಾರಿಯೇ ಸೌಜನ್ಯ SITಗೆ ಏಕೆ? ಸುಪ್ರೀಂ ಕೋರ್ಟ್ ಹೇಳಿದ ‘ತನಿಖೆಯ ವೈಫಲ್ಯ’ ಮತ್ತು ವೆಂಕಟೇಶ್ ಪ್ರಸನ್ನ !
– ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ತನಿಖೆ ಇನ್ನು ಸಾಮಾನ್ಯ ಪೊಲೀಸ್ ತನಿಖೆಯ ಪ್ರಶ್ನೆಯಾಗಿ ಉಳಿದಿಲ್ಲ. ಈ ಪ್ರಕರಣದಲ್ಲಿ ತನಿಖೆ ಹೇಗೆ ನಡೆಯಿತು, ತನಿಖಾಧಿಕಾರಿಗಳು ಯಾವ ಸಾಕ್ಷ್ಯಗಳನ್ನು ಸಂಗ್ರಹಿಸಿದರು, ಯಾವ ಸಾಕ್ಷ್ಯಗಳನ್ನು ಕಡೆಗಣಿಸಿದರು, ನೈಜ ಆರೋಪಿಗಳತ್ತ ತನಿಖೆ ಏಕೆ ಸಾಗಲಿಲ್ಲ ಮತ್ತು ತನಿಖೆಯ ವೈಫಲ್ಯದಿಂದ ಯಾರಿಗೆ ಲಾಭವಾಯಿತು ಎಂಬ ಪ್ರಶ್ನೆಗಳಿಗೆ ಇದೀಗ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಅತ್ಯಂತ ಗಂಭೀರವಾದ ಮಾತುಗಳನ್ನು ದಾಖಲಿಸಿದೆ. ಹೀಗಿರುವಾಗ ವೆಂಕಟೇಶ ಪ್ರಸನ್ನರಂತಹ ಅಧಿಕಾರಿಯನ್ನು ಎಸ್ಐಟಿಯಲ್ಲಿ ಯಾಕೆ ಸೇರಿಸಲಾಯಿತು ? 2026ರ ಸೆಪ್ಟೆಂಬರ್...
ಸೌಜನ್ಯ ಪ್ರಕರಣ : ಸುಪ್ರೀಂ ಕೋರ್ಟ್ ಪ್ರಕಾರ ನೈಜ ಆರೋಪಿಗಳಿಂದ ‘ಲಾಭ’ ಪಡೆದ ಅಧಿಕಾರಿಗಳು ಯಾರು ?
ತನಿಖೆಯ ವೈಫಲ್ಯವೇ ತನಿಖಾಧಿಕಾರಿಗಳಿಗೆ ‘ಪ್ರೀಮಿಯಂ’ ಒದಗಿಸಿತು ! ಸುಪ್ರೀಂ ಕೋರ್ಟ್ ತೀರ್ಪಿನಲ್ಲಿರುವ ಯಾರೂ ಗಮನಿಸದ ಪ್ರಶ್ನೆ – ನವೀನ್ ಸೂರಿಂಜೆ ಸೌಜನ್ಯ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕೇವಲ “ಮರುತನಿಖೆಗೆ ಆದೇಶ” ಎಂದು ಓದಿದರೆ ಈ ತೀರ್ಪಿನ ಅರ್ಧಕ್ಕಿಂತಲೂ ಕಡಿಮೆ ಅರ್ಥ ಮಾತ್ರ ನಮಗೆ ಸಿಗುತ್ತದೆ. ಈ ತೀರ್ಪಿನ ನಿಜವಾದ ಮಹತ್ವ ಮತ್ತೊಂದು ಕಡೆ ಇದೆ. ನ್ಯಾಯಾಲಯವು ತನಿಖೆಯಲ್ಲಿನ ಲೋಪಗಳನ್ನು ಪಟ್ಟಿ ಮಾಡಿರುವುದಷ್ಟೇ ಅಲ್ಲ, ಆ ಲೋಪಗಳ ಪರಿಣಾಮವಾಗಿ ನ್ಯಾಯ ವ್ಯವಸ್ಥೆಯ ಮೇಲೆಯೇ ಯಾವ...
ಸೌಜನ್ಯ ಪ್ರಕರಣ ನ್ಯಾಯಾಲಯದ ಆತ್ಮಸಾಕ್ಷಿಯನ್ನೇ ಬೆಚ್ಚಿಬೀಳಿಸಿದೆ ಎಂದ ಸುಪ್ರಿಂ ಕೋರ್ಟ್ ! ಸೌಜನ್ಯಗೆ ಪೊಲೀಸರು ಅನ್ಯಾಯ ಮಾಡಿದರು ! ನಿಜವಾದ ಆರೋಪಿಗಳು ತನಿಖೆಯ ದಾರಿ ತಪ್ಪಿಸಿದರು: ಸುಪ್ರೀಂ ತೀರ್ಪಿನ ಸ್ಫೋಟಕ ಮಾಹಿತಿ
– ನವೀನ್ ಸೂರಿಂಜೆ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 14 ವರ್ಷಗಳ ಹಿಂದೆ ನಡೆದ ಈ ಅಪರಾಧದ ತನಿಖೆಯನ್ನು ವಿವಿಧ ಹಂತಗಳಲ್ಲಿ ನಡೆಸಿದ ರೀತಿಯನ್ನೇ ನ್ಯಾಯಾಲಯ ಅತ್ಯಂತ ಗಂಭೀರವಾಗಿ ಪ್ರಶ್ನಿಸಿದೆ. ಹಿಂದಿನ ತನಿಖೆಯಲ್ಲಿ ಉಳಿದುಹೋಗಿರುವ ಸಾಕ್ಷ್ಯಗಳು, ತನಿಖೆಯಲ್ಲಿನ ಲೋಪಗಳು ಮತ್ತು ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚುವ ಅವಕಾಶವೇ ಹಾಳಾಗಿರುವ ಸಾಧ್ಯತೆಯ ಬಗ್ಗೆ ಸುಪ್ರೀಂಕೋರ್ಟ್ ದಾಖಲಿಸಿರುವ ಅಭಿಪ್ರಾಯಗಳು ಈ ಪ್ರಕರಣದ ಮುಂದಿನ ತನಿಖೆಗೆ ಮಹತ್ವದ ದಿಕ್ಕು...
ಸೌಜನ್ಯ ಚೂಡಿದಾರ್‌ನಲ್ಲಿದ್ದ ಅಪರಿಚಿತನ ಕೂದಲು ಈಗಲೂ DNA ಸಾಕ್ಷಿ! ಮೂರು ವಾರದಲ್ಲಿ ಸಿಕ್ಕಿದೆ 8 ಸಾಕ್ಷಿಗಳು ! ಸುಪ್ರೀಂಕೋರ್ಟ್ ತೀರ್ಪಿನ ಸ್ಫೋಟಕ ಗಮನಾರ್ಹ ಅಂಶಗಳು
ನವೀನ್ ಸೂರಿಂಜೆ ಧರ್ಮಸ್ಥಳದ 17 ವರ್ಷದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಕೇವಲ ಮರುತನಿಖೆಗೆ ಆದೇಶ ನೀಡಿದ ತೀರ್ಪಲ್ಲ. 2012ರಿಂದ ಬೆಳ್ತಂಗಡಿ ಪೊಲೀಸರು, ಕರ್ನಾಟಕ CID ಮತ್ತು CBI ನಡೆಸಿದ ತನಿಖೆಗಳಲ್ಲಿದ್ದ ಗಂಭೀರ ಲೋಪಗಳನ್ನು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ದಾಖಲೆಗಳ ಆಧಾರದ ಮೇಲೆ ಎತ್ತಿಹಿಡಿದಿದೆ. ಇದಕ್ಕಿಂತಲೂ ಮುಖ್ಯವಾಗಿ, ತನಿಖೆ ಮುಗಿದು 14 ವರ್ಷಗಳಾದರೂ ಕೆಲವು ಸಾಕ್ಷ್ಯಗಳು ಇನ್ನೂ ಜೀವಂತವಾಗಿವೆ ಎಂಬುದನ್ನು ನ್ಯಾಯಾಲಯವೇ ಪತ್ತೆಹಚ್ಚಿದೆ. ಸೌಜನ್ಯ ಚೂಡಿದಾರ್ ನಲ್ಲಿ ಸಂತೋಷ್ ರಾವ್ಅವರದ್ದು ಅಲ್ಲದ...
ಕರಾವಳಿಯ ಹಿಂದುತ್ವ ರಕ್ಷಣೆಯ ಸಭೆ ‘ಬಾರ್’ಗಳಲ್ಲಿ ನಡೆಯುತ್ತೆ ! ಕೋರ್ಟ್ ದಾಖಲೆಯಲ್ಲಿದೆ ಸ್ಫೋಟಕ ಅಂಶಗಳು!
ನವೀನ್ ಸೂರಿಂಜೆ ಕೋಮುಗಲಭೆ, ಪ್ರತಿಕಾರದ ಕೊಲೆಗಳು, ಹಿಂದುತ್ವದ ರಕ್ಷಣೆ, ಮುಸ್ಲಿಮರ ವಿರುದ್ಧದ ಕಾರ್ಯಾಚರಣೆಗಳ ಬಗ್ಗೆ ಚರ್ಚೆಗಳು ಆರ್‌ಎಸ್‌ಎಸ್‌ನ ಬೈಠಕ್‌ಗಳಲ್ಲಿ, ಶಾಖೆಗಳಲ್ಲಿ ನಡೆಯುತ್ತವೆ ಎಂದು ಸಾಮಾನ್ಯವಾಗಿ ಅಂದುಕೊಳ್ಳಲಾಗುತ್ತದೆ. ಆದರೆ ಕರಾವಳಿಯ ಹಿಂದುತ್ವ ರಾಜಕಾರಣದ ಒಂದು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ನ್ಯಾಯಾಲಯದ ದಾಖಲೆಗಳನ್ನು ಗಮನಿಸಿದರೆ, ಕಥೆ ಸ್ವಲ್ಪ ಭಿನ್ನವಾಗಿ ಕಾಣಿಸುತ್ತದೆ. ಹಿಂದುತ್ವದ ಹೆಸರಿನಲ್ಲಿ ನಡೆಯುವ ಪಿತೂರಿಯ ಸಭೆಗಳು ಶಾಖೆಗಳಲ್ಲಿ ಮಾತ್ರವಲ್ಲ, ಬಾರ್‌ಗಳಲ್ಲೂ ನಡೆದಿವೆ ಎಂಬ ಆರೋಪಗಳು ಪೊಲೀಸ್ ಚಾರ್ಜ್‌ಶೀಟ್ ಮತ್ತು ನ್ಯಾಯಾಲಯದ ದಾಖಲೆಗಳಲ್ಲಿ ದಾಖಲಾಗಿವೆ. ಕೊಳ್ತಮಜಲು ರೆಹಮಾನ್ ಕೊಲೆ ಪ್ರಕರಣದಲ್ಲಿ...
ರೆಹಮಾನ್ ಕೊಲೆ ಆರೋಪಿ ಭಜರಂಗಿಗಳಿಗೆ ಜಾಮೀನು ಆಗಿದ್ದು ಹೇಗೆ? ಕೋಕಾ ನ್ಯಾಯಾಲಯದ ವೈರುಧ್ಯಗಳೇನು? ಸರ್ಕಾರದ ವೈಫಲ್ಯಗಳೇನು?
– ನವೀನ್ ಸೂರಿಂಜೆ ತನ್ನ ಹಿಂದೂ ಗೆಳೆಯನ ತಂದೆಗೆ ರಕ್ತದಾನ ಮಾಡಿದ್ದ ಕೊಳ್ತಮಜಲು ರೆಹಮಾನ್‌ನನ್ನು ಅದೇ ಹಿಂದೂ ಗೆಳೆಯ ಭಜರಂಗದಳದ ಜೊತೆ ಸೇರಿಕೊಂಡು ಮನೆಗೆ ಕರೆಯಿಸಿ ಕೊಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಆರೋಪಿಗಳಿಗೆ ಮೈಸೂರಿನ ಕೋಕಾ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ. ಭೀಕರ ಕೊಲೆ ಪ್ರಕರಣದಲ್ಲಿ ಆರೋಪಿಗಳು ಜಾಮೀನು ಪಡೆದಿರುವುದು ಸಹಜವಾಗಿಯೇ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪ್ರಕರಣದಲ್ಲಿ ಕೋಕಾ ಕಾಯ್ದೆ ಅನ್ವಯಿಸಿದ್ದರೂ ಜಾಮೀನು ಹೇಗೆ ಸಿಕ್ಕಿತು? ಪೊಲೀಸರು ಸಲ್ಲಿಸಿದ ಸಾಕ್ಷ್ಯಗಳಲ್ಲಿ ಏನು ಕೊರತೆಯಿತ್ತು? ಸರ್ಕಾರಿ ವಕೀಲರು...






